Download Now Banner

This browser does not support the video element.

ಕುಣಿಗಲ್: ಪಟ್ಟಣದಲ್ಲಿ ಶಾಸಕ ರಂಗನಾಥ್ ನೇತೃತ್ವದಲ್ಲಿ ಕುಂದು ಕೊರತೆ ಸಭೆ : ಜನರನ್ನ ನಿಯಂತ್ರಿಸಲು ಅಧಿಕಾರಿ ವರ್ಗ ವಿಫಲ

Kunigal, Tumakuru | Sep 9, 2025
ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕ ಡಾ. ಹೆಚ್. ಡಿ. ರಂಗನಾಥ್ ನೇತೃತ್ವದಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಜನದಟ್ಟಣೆ ನಿಯಂತ್ರಿಸಲು ಅಧಿಕಾರಿ ವರ್ಗ ವಿಫಲರಾದರು. ಮಂಗಳವಾರ ಮಧ್ಯಾಹ್ನ 3.30 ರ ಸಮಯದಲ್ಲಿ ಪರಿಸ್ಥಿತಿಯನ್ನ ಅವಲೋಕಿಸಿದ ಶಾಸಕ ಡಾ. ಹೆಚ್. ಡಿ. ರಂಗನಾಥ್ ಅವರೆ ಜನರನ್ನ ನಿಯಂತ್ರಿಸಲು ಪ್ರಯತ್ನಪಟ್ಟರು. ಕೊತ್ತಗೆರೆ, ಹುಲಿಯೂರು ದುರ್ಗಾ,ಹುತ್ರಿ ದುರ್ಗಾ ಅಮೃತ್ತೂರು, ಯಡಿಯೂರು ಕುಣಿಗಲ್ ಕಸಬಾ ಸೇರಿದಂತೆ 6 ಹೋಬಳಿ ಜನರನ್ನ ಪ್ರತ್ಯೇಕವಾಗಿಸಿ ಅಧಿಕಾರಿಗಳು ಅವರ ಸಮಸ್ಯೆ ಪಟ್ಟಿಮಾಡಿಕೊಂಡಲು ತಿಳಿಸಿದರು. ಬಳಿಕ ನನ್ನ ಬಳಿ ಬನ್ನಿ ಎಂದು ಶಾಸಕರು ಹೇಳಿದರು. ಕಂದಾಯ ಇಲಾಖೆ ಸಮಸ್ಯೆಗಳನ್ನೇ ಜನರು ಶಾಸಕರ ಬಳಿ ನಿವೇದಿಸಿಕೊಂಡರು.
Read More News
T & CPrivacy PolicyContact Us