ಸಿಇಎನ್ ಪೊಲೀಸರಿಂದ ಮುಂಬೈನ ಗಾಂಜಾ ಪೆಡ್ಲರ್ ಬಂಧನ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ಹೇಳಿದರು. ಇಸ್ಮಾಯಿಲ್ ಅಲಿಯಾಸ್ ಸದ್ದಾಂ ಎಂಬ ಗಾಂಜಾ ಪೆಡ್ಲರ್‌ನ ಮನೆಯ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ ಮತ್ತು ದಾಳಿ ವೇಳೆ 2 ಕೆ.ಜಿ. ಗಾಂಜಾ, 10 ಮೊಬೈಲ್ ಫೋನ್, ಒಂದು ಮಚ್ಚು ಮತ್ತು ಸರ್ಜಿಕಲ್ ಚಾಕು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಶುಕ್ರವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಬೆಳಗಾವಿ ಸಿಇಎನ್ ಪೊಲೀಸರು ಮುಂಬೈನ ಇಸ್ಮಾಯಿಲ್ ಅಲಿಯಾಸ್ ಸದ್ದಾಂ ಎಂಬ ಗಾಂಜಾ ಪೆಡ್ಲರ್‌ನ ಮನೆಯ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ ಎಂದು ಹೇಳಿದರು