ನವರಾತ್ರಿ ಉತ್ಸವದ ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಠಾಣೆ, ವೃತ್ತ ನಿರೀಕ್ಷಕರ ಕಚೇರಿ, ಪೊಲೀಸ್ ಉಪ ವಿಭಾಗ ಕಚೇರಿ, ಸಂಚಾರ ಪೊಲೀಸ್ ಠಾಣೆಯಲ್ಲಿ ವಾಹನ ಮತ್ತು ಆಯುಧಗಳಿಗೆ ಬುಧವಾರ ಮಧ್ಯಾಹ್ನ 1ಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪೊಲೀಸ್ ಠಾಣೆಯಿಂದ ಪ್ರಮುಖ ರಸ್ತೆಗಳಿಂದ ವೀರಭದ್ರೇಶ್ವರ ದೇವಸ್ಥಾನ ತೆರಳಿ ಅಲ್ಲಿಂದ ಶಿವಚಂದ್ರ್ ರಸ್ತೆ, ಬಸವೇಶ್ವರ ವೃತ್ತದ ಮಾರ್ಗದಲ್ಲಿ ಒಂದೇ ಮಾದರಿ ಸಿವಿಲ್ ಡ್ರೆಸ್ ಧರಿಸಿ ಗಮನಸೆಳೆದರು.