ಹೈಮಾಸ್ಟ್ ಬೀದಿ ದೀಪ ಅಳವಡಿಕೆ ವಿಚಾರದಲ್ಲಿ ತಗಾದೆ ತೆಗೆದು ಮಾಲೂರು ಶಾಸಕ ಕೆ.ವೈ ನಂಜೇಗೌಡ ಅಪ್ತ ಹಾಗೂ ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿ ಕರೀಸಂದ್ರ ಗ್ರಾಮದಲ್ಲಿ ನಡೆದಿದೆ.ಇತ್ತೀಚೆಗೆ ಅಷ್ಟೇ ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿರುವ ವಲಸೆ ಕಾಂಗ್ರೆಸ್ ಕಾರ್ಯಕರ್ತರಾದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಹಾಗೂ ಅವರ ತಮ್ಮಂದಿರಾದ ಅನಂದ ಮುನಿರಾಜು ಎಂಬುವರಿಂದ ಪ್ರವೀಣ ಹಾಗೂ ಅವರ ತಮ್ಮಂದಿರು ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಪ್ರವೀಣ ಭಾನುವಾರ ಮಾತನಾಡಿ ಶಾಸಕರ ಅನುದಾನದಲ್ಲಿ ಬಿಡುಗಡೆಯಾಗಿರುವ ಹೈಮಾಸ್ಟ್ ಬೀದಿದೀಪ ಅಳವಡಿಕೆ ವಿಚಾರ ನೆಪ ಮಾತ್ರ ಎಂದ್ರು