ತಾಯಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಆದರೆ ಇಲ್ಲೊಬ್ಬ ಆದಿವಾಸಿ ಮಹಿಳೆ ಕಂಕುಳಲ್ಲಿ ಪುಟ್ಟ ಕಂದಮ್ಮನ ಹಿಡಿದಿರುವುದನ್ನ ಮರೆತು ಮದ್ಯ ಅಮಲಿನಲ್ಲಿ ತೇಲಾಡುವುದಲ್ಲದೆ ಮಗುವಿಗೆ ಮನಬಂದಂತೆ ಥಳಿಸಿದ್ದಾಳೆ. ಬಾಣಂತಿ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದು ಕಂಕುಳಲ್ಲಿ ಪುಟ್ಟ ಕಂದಮ್ಮನ ಹಿಡಿದಿರುವುದನ್ನ ಮರೆತು ಎರಡು ಕ್ವಾರ್ಟರ್ ಕೊಡಿಸಿ ಸಾಕು ಏನೂ ಬೇಡ ಎನ್ನುತ್ತಿದ್ದಾಳೆ. ಮದ್ಯದ ಚಟಕ್ಕೆ ಬಲಿಯಾಗಿ ಮಹಿಳೆ ತನ್ನ ಒಂಬತ್ತು ತಿಂಗಳ ಹಸುಗೂಸಿನ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು ಸದ್ಯ ಸ್ಥಳೀಯರ ನೆರವಿನಿಂದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆ, ಪೊಲೀಸರ ನೆರವಿನಿಂದ ಮಗುವನ್ನ ರಕ್ಷಣೆ ಮಾಡಿದ್ದಾರೆ.ಎಚ್ ಡಿ ಕೋಟೆಯ ಚಿಕ್ಕೆರೆಹಾಡಿಯಲ್ಲಿ ಘಟನೆ.