ಚಿಕ್ಕಬಳ್ಳಾಪುರ ವಕೀಲರ ಸಂಘದ ವತಿಯಿಂದ ಈ ಬಾರಿ ಗಣೇಶ ಚತುರ್ಥಿಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತಿದೆ 5 ದಿನಗಳ ಕಾಲ ನಡೆಯುವ ಗಣೇಶೋತ್ಸವ ಹಿನ್ನೆಲೆಯಲ್ಲಿ ಸಂಘದ ಭವನದಲ್ಲಿ ಗಣೇಶನ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೂವು,ವಿದ್ಯುತ್ ದೀಪಮಾಲೆ ಮತ್ತು ವೈವಿಧ್ಯಮಯ ಅಲಂಕಾರಗಳಿಂದ ವಕೀಲರ ಭವನಕ್ಕೆ ಸಿಂಗರಿಸಲಾಗಿದೆ. ಗುರುವಾರ ಮುಹೂರ್ತಕ್ಕೆ ಅರ್ಚಕರಿಂದ ವೇದಮಂತ್ರಗಳ ನಾದದ ನಡುವೆ ವಿಶೇಷ ಪೂಜೆ,ಹೋಮ ನೆರವೇರಿತು,ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರ ಭಾವನಿ,ಕಾಂತರಾಜ್,ಶ್ರೀ ಧರ್ ಭಾರತಿ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ಶಿಲ್ಪ,ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ವಕೀಲರ ಸಂಘದ ವತಿಯಿಂದ ಗಣೇಶೋತ್ಸವ ಆಚರಣೆ