ತುಮಕೂರು ಶೆಟ್ಟಿಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಸೇರಿರುವ ಜಾಗ ಬೇರೊಬ್ಬರ ಹೆಸರಿಗೆ ಖಾತೆ ಮಾಡಿಕೊಟ್ಟು ಕಂದಾಯ ಇಲಾಖೆ ಎಡವಟ್ಟು ಮಾಡಿದೆ ಎಂದು ದೇವಾಲಯ ವ್ಯವಸ್ಥಾಪಕ ಸಮಿತಿ ಮಾಜಿ ಪದಾಧಿಕಾರಿಗಳು ಜಿಲ್ಲಾಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿವಾದಾತ್ಮಕ ಜಾಗದ ವಿಚಾರವು ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಸಮಿತಿ ಮುಖಂಡರಾದ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಗುರುಸಿದ್ದಪ್ಪ ಹಾಗೂ ರಾಮಚಂದ್ರ ನಾಯಕ್ ಅವರುಗಳು ಮಾತನಾಡಿ, ಶೆಟ್ಟಿಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭಕ್ತರಾಗಿದ್ದ ಬೆಂಗಳೂರು ಮೂಲದ ಲಿಂಗಪ್ಪ ಅವರು ದೇವಾಲಯ ಹೆಸರಿಗೆ ಖಾತೆ ಕೂರಿಸಿಲಾಗಿದೆ