ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ, ಬೊಮ್ಮಲಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ಪ್ರದೇಶದಲ್ಲಿ ಹುಲಿ ಸೆರೆಗಾಗಿ ಸಾಕಾನೆ ಪ್ರಶಾಂತ ಬಳಸಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಸಾಕಾನೆ ಪ್ರಶಾಂತನ ಜೊತೆ 40 ಕ್ಕೂ ಹೆಚ್ಚು ಸಿಬ್ಬಂದಿ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ಹುಲಿ ಸೆರೆಗೆ ಹಿಡಿಯುವಂತೆ ಬೊಮ್ಮಲಪುರ ಗ್ರಾಮಸ್ಥರು ಆಗ್ರಹಿಸಿದರು.