ನಗರದ ಹೊರವಲಯದಲ್ಲಿರುವ ಅಸ್ಕಿಹಾಳದಲ್ಲಿ ಬಿಡಾಡಿ ದನಗಳು ಹೆದ್ದಾರಿ ಮುಖ್ಯ ರಸ್ತೆಯನ್ನು ಬಂದ್ ಮಾಡಿದವು. ಆಗಸ್ಟ್ 28ರ ಗುರುವಾರ ಬೆಳಗ್ಗೆ 10 ಗಂಟೆಗೆ ಹೆದ್ದಾರಿ ರಸ್ತೆ ತುಂಬಾ ಬಿಡಾಡಿ ದನಗಳು ಮಲಗಿಕೊಂಡು ವಿಶ್ರಾಂತಿ ಪಡೆದವು. ಸಾರ್ವಜನಿಕರ ದ್ವಿಚಕ್ರ ವಾಹನಗಳು, ಸಾರಿಗೆ ಬಸ್ಸುಗಳು ಕಾರು ಮತ್ತು ಲಾರಿಗಳು ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಬಿಡಾಡಿ ದನಗಳಿಗೆ ಕಡಿವಾಣ ಹಾಕಲು ಈಗಾಗಲೇ ಮಹಾನಗರ ಪಾಲಿಕೆ ಅಧಿಕಾರಿಗಳು ಸಂಬಂಧಪಟ್ಟವರು ಕ್ರಮ ಕೈಗೊಂಡರೂ ದನಗಳ ಹಾವಳಿ ನಿಂತಿಲ್ಲ. ಬಿಡಾಡಿ ದನಗಳ ಮಾಲೀಕರಿಗೆ ದಂಡ ವಿಧಿಸಬೇಕು ಎಂದು ವಾಹನಗಳ ಸವಾರರು ಆಕ್ರೋಶ ಹೊರಹಾಕಿದರು.