ರಾಯಚೂರು ನಗರದ ಹರಿಜನ ಮಾಡಕ್ಕೆ ಶವ ಯಾತ್ರೆಯ ಅಂಗವಾಗಿ ವೈಕುಂಠ ಯಾತ್ರೆ ವಾಹನವನ್ನು ವಿಧಾನಪರಿಷತ್ ಸದಸ್ಯ ವಸಂತಕುಮಾರ್ ಅವರು ವಿತರಿಸಿದರು. ಶುಕ್ರವಾರ ಮಧ್ಯಾನ ಹರಿಜನವಾಡಾದಲ್ಲಿ ಅಂತಿಮ ಯಾತ್ರೆಯ ವಾಹನ ಲೋಕಾರ್ಪಣೆಗೊಳಿಸಿ ಮಾತನಾಡಿ, ಇಲ್ಲಿಯ ಜನರ ಬಹುದಿನಗಳ ಬೇಡಿಕೆಯಾಗಿತ್ತು, ತುಂಬಾ ದೂರದಲ್ಲಿ ಸ್ಮಶಾನ ಇರುವುದರಿಂದ ಅಂತಿಮ ಯಾತ್ರೆಗೆ ಸಮಸ್ಯೆ ಉಂಟಾಗುತ್ತಿತ್ತು ಅದನ್ನು ರಿತು ಇಂದು ವೈಕುಂಠ ಯಾತ್ರೆ ವಾಹನ ಲೋಕಾರ್ಪಣೆ ಗೊಳಿಸಿದ್ದು ಜನರು ಇದರ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಉಪಸ್ಥಿತರಿದ್ದರು.