Download Now Banner

This browser does not support the video element.

ಚಿಕ್ಕಬಳ್ಳಾಪುರ: ನಾನು ಸಂಸದರ ತಂಟೆಗೆ ಹೋಗುವುದಿಲ್ಲ,ಕರೆದರೆ ನಿದ್ದೆ ಮಾಡಕ್ಕೂ ಬಿಡುವುದಿಲ್ಲ:ನಗರದಲ್ಲಿ ಶಾಸಕ ಪ್ರದೀಪ್ ಈಶ್ವರ್

Chikkaballapura, Chikkaballapur | Sep 10, 2025
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ ಸುಧಾಕರ್ ರವರ ನಡುವಿನ ಶೀಥಲ ಸಮರ ಮುಂದುವರೆದಿದೆ. ಇತ್ತೀಚಿಗೆ ಸಂಸದ ಡಾ.ಕೆ ಸುಧಾಕರ್ ರವರು, ಶಾಸಕರು ಈ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿಲ್ಲ ಕೇವಲ ಸಿನಿಮಾ ಡೈಲಾಗ್ ಗಳನ್ನು ಹೇಳಿಕೊಂಡು ಓಡಾಡುತ್ತಿರುತ್ತಾರೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು,ಸಂಸದ ಡಾ.ಕೆ ಸುಧಾಕರ್ ರವರು ಈ ಹಿಂದೆ ಸಚಿವರಾಗಿದ್ದರು, ಎಷ್ಟು ಎಸ್ಸಿ ಕಾಲೋನಿಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿದ್ದಾರೆ.ಹಾಗಾಗಿ ಅವರ ತಂಟೆಗೆ ನಾನು ಹೋಗುವುದಿಲ್ಲ. ಆದರೆ ಅವರೇ ಬಾ ಎಂದು ಕರೆದರೆ,ಅವರನ್ನು ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಟಾಂಗ್ ನೀಡಿದರು.
Read More News
T & CPrivacy PolicyContact Us