ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಉಪಟಳವನ್ನು ನೀಡುತ್ತಿದ್ದ ಪುಂಡಾನೆ ಸೆರೆಹಿಡಿಯಲು ಬಂದಿದ್ದ ಆರು ಕುಮ್ಕಿ ಆನೆಗಳು ಪುಂಡನೆ ಸೆರೆ ಕಾರ್ಯಾಚರಣೆಯ ಬಳಿಕ ವಾಪಸ್ ತೆರಳಿದವು. ಸಾಕಷ್ಟು ದಿನಗಳಿಂದ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ ಹಿಡಿಯಲು ಬಂದಿದ್ದ ಆನೆಗಳಿಗೆ ಸ್ಥಳೀಯರು ಖುಷಿಯಿಂದಲೇ ಬೀಳ್ಕೊಕೊಟ್ಟರು.