ಕುಲಸಚಿವ ಪ್ರೊ.ಲೋಕನಾಥ್ ಮಾತನಾಡಿ ನಾವಿಂದು ಒಳ್ಳೆಯ ವೈದ್ಯರನ್ನು, ಇಂಜನಿಯರ್‌ಗಳನ್ನು ತಯಾರಿಸಲು ಹೊರಟಿದ್ದೇವೆ.ಇದರ ಜತೆಗೆ ಪ್ರಾಮಾಣಿಕವಾದ ರಾಜಕಾರಣಿಗಳ ಅವಶ್ಯಕತೆಯಿದೆ.ದೇಶದ ಬೆಳವಣಿಗೆ, ಆರ್ಥಿಕತೆ, ಶಿಕ್ಷಣ,ವಿಜ್ಞಾನ, ಸಮಾಜ, ದೇಶಭಕ್ತಿ ಇತ್ಯಾದಿ ಎಲ್ಲದರ ಬಗ್ಗೆಯೂ ಸಮಗ್ರ ತಿಳುವಳಿಕೆಯಿರುವ ರಾಜಕಾರಣಿಗಳು ಬೇಕಾಗಿದೆ.ಉತ್ತಮ ರಾಜಕಾರಣಿಗಳು ರಾಜಕೀಯರಂಗದಲ್ಲಿದ್ದರೆ, ಉತ್ತಮ ಆಡಳಿತದ ಜತೆಗೆ ಉತ್ತಮ ಕಾನೂನು ಕಟ್ಟಳೆಗಳು ನಿರ್ಮಾಣ ಆಗಲಿವೆ. ಇಂತಹ ಜ್ವಲಂತ ಸಂಗತಿಗಳ ಬಗ್ಗೆ ರಾಜ್ಯಶಾಸ್ತç ವಿಭಾಗದ ಅಧ್ಯಾಪಕರ ಸಂಘವು ಏರ್ಪಡಿಸಿರುವ ಒಂದು ದಿನದ ವಿಚಾರ ಸಂಕಿರಣವು ಬೆಳಕು ಚೆಲ್ಲಲಿ ಎಂದು ಹೇಳಿದರು.