ಪೋಕ್ಸೋ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೂ ಆರೋಪಿ ಅಪ್ರಾಪ್ತ ಬಾಲಕಿ ಮನೆಗೆ ನುಗ್ಗಿ ಕೇಸ್ ದಿಕ್ಕುತಪ್ಪಿಸಲು ಯತ್ನಿಸಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪ್ರಕರಣ ಬೆಳಕಿಗೆ ಬಂದಿದೆ.ಅಪ್ರಾಪ್ತಳ ಮನೆಗೆ ಅಕ್ರಮವಾಗಿ ನುಗ್ಗಿದ ಪೋಕ್ಸೋ ಆರೋಪಿ ವಿರುದ್ದ ಅಪ್ರಾಪ್ತಳ ತಾಯಿ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಮಂಡಿಮೊಹಲ್ಲಾ ಕೈಲಾಸಪುರಂ ನಿವಾಸಿ ರಾಜಣ್ಣ (40) ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಆರೋಪಿ. ಅಪ್ರಾಪ್ತ ಬಾಲಕಿಯನ್ನ ರಾಜಣ್ಣ 2023 ರಲ್ಲಿ ಪುಸಲಾಯಿಸಿ ಕರೆದೊಯ್ದಿದ್ದ.ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲೇರಿದೆ.ಆರೋಪಿ ರಾಜಣ್ಣ ಜಾಮೀನು ಪಡೆದಿದ್ದ.ಇದಾದ ನಂತರ ಮತ್ತೊಮ್ಮೆ ಬಾಲಕಿಯನ್ನ ಪುಸಲಾಯಿಸಿ ಕರದೊಯ್ದು.