ಇತ್ತೀಚಿನ ಕೆಲ ದಿನಗಳಿಂದ ಧರ್ಮಸ್ಥಳದ ವಿಚಾರವಾಗಿ ನಡೆಯುತ್ತಿರುವಂತಹ ಸಂಘರ್ಷಗಳ ಮತ್ತು ಎಸ್ಐಟಿ ತನಿಖೆ ಮತ್ತು ಇತರ ವಿಚಾರಗಳಿಂದಾಗಿ ಧರ್ಮಸ್ಥಳದ ಹೆಸರಿಗೆ ಕಳಂಕ ತರುವಂತಹ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಟಿ ಏರ್ಪಡಿಸಿದ್ದರು. ಇದೇ ನಾಳೆ ಚಿಂತಾಮಣಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಇದನ್ನು ಯಶಸ್ವಿಗೊಳಿಸಲು ಎಲ್ಲ ನಾಗರೀಕರು ಸಹಕರಿಸಬೇಕೆಂದು ಮನವಿ ಮಾಡಿದರು.