ತುಮಕೂರು ಮಹಾನಗರ ಪಾಲಿಕೆ ಸೇರಿದ 2 ಎಕರೆ ಭೂಮಿಯನ್ನು ಬಹಿರಂಗ ಹರಾಜು ಪ್ರಕ್ರಿಯೆ ನಡೆಸದೆ ಕಾಂಗ್ರೆಸ್ ಭವನ ಟ್ರಸ್ಟ್ ಗೆ ನೋಂದಣಿ ಮಾಡಿಕೊಟ್ಟಿರುವುದಕ್ಕೆ ಕೇಂದ್ರಸಚಿವ ವಿ. ಸೋಮಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿದರು. ಅವರು ತುಮಕೂರು ನಗರ ರೈಲ್ವೆ ನಿಲ್ದಾಣ ರಸ್ತೆಯ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶನಿವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಮಾತನಾಡಿದರು. ಪಾಲಿಕೆ ವ್ಯಾಪ್ತಿಯ ಭೂಮಿಯನ್ನ ಟ್ರಸ್ಟ್ ಗೆ ನೀಡಬೇಕಾದರೆ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಬೇಸಬೇಕು ಎಂಬ ಕಾನೂನು ಜಾರಿಗೆ ತಂದವರೇ ಕಾಂಗ್ರೆಸ್ ನೇತೃತ್ವದ ಸರಕಾರ ಆದರೆ ಅವರೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಕಸ ಡಂಪ್ ಮಾಡುವ ಜಾಗವೇ ಏಕೆ ಬೇಕಿತ್ತು ಕಾಂಗ್ರೆಸ್ ಭವನ ಕಟ್ಟುವುದಕ್ಕೆ ಎಂದು ಪ್ರಶ್ನೆ ಮಾಡಿದರು.