ದಾಂಡೇಲಿ : ನಗರದ ರೋಟರಿ ಕ್ಲಬ್ ಮತ್ತು ಕೊಕಪೇಟ್ ಏಕಂ ರೋಟರಿ ಕ್ಲಬ್ ಸಹಯೋಗದೊಂದಿಗೆ ನಗರದ ಸುತ್ತಮುತ್ತಲ ಗ್ರಾಮೀಣ ಭಾಗದ 10 ಬಡ ವಿದ್ಯಾರ್ಥಿನಿಯರಿಗೆ ತಮ್ಮ ಶೈಕ್ಷಣಿಕ ಚಟುವಟಿಕೆಗೆ ಅನುಕೂಲವಾಗುವ ಹಿನ್ನಲೆಯಲ್ಲಿ ಇಂದು ಮಂಗಳವಾರ ಬೆಳಿಗ್ಗೆ 10:00 ಸುಮಾರಿಗೆ ಉಚಿತವಾಗಿ ಸೈಕಲ್ ಗಳನ್ನು ವಿತರಿಸಲಾಯಿತು. ಈ ಪರಿಣಾಮಕಾರಿ ಉಪಕ್ರಮವನ್ನು ಡಾ. ಪ್ರಣೀತಾ ವಲ್ಲಲಾ, ಅವರ ಕುಟುಂಬ ಮತ್ತು ಸ್ನೇಹಿತರು ಪ್ರಾಜೆಕ್ಟ್ ದೇವಿ - ಗಿವ್ ಬ್ಯಾಕ್ ಟು ನೇಚರ್ ಪ್ರಾಜೆಕ್ಟ್ ಅಡಿಯಲ್ಲಿ ಪ್ರಾಯೋಜಿಸಿದ್ದಾರೆ. ಉಚಿತ ಸೈಕಲನ್ನು ವಿತರಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಆಶುತೋಷ್ ಕುಮಾರ್ ರಾಯ್ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ರೋಟರಿ ಕ್ಲಬ್ ನಿರಂತರವಾಗಿ ಸಹಕರಿಸುತ್ತಿದೆ ಎಂದರು.