ಜಿಲ್ಲಾ ಅಧಿಕಾರಿ ಕಚೇರಿಗಳಿಂದ ಕೋಮುಲ್ ಗೆ ನಿಯಮ ಬಹೀರವಾಗಿ ಜಮೀನು ಮಂಜೂರು ಮಾಡಿದ್ದಾರೆ. ಕಂದಾಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ. ರೈತರಿಗೆ ನೀಡಿರುವ ಜಾಗವನ್ನು ಕೋಮುಲ್ ವತಿಯಿಂದ ಸೋಲಾರ್ ಘಟಕವನ್ನು ಸ್ಥಾಪನೆ ಮಾಡುತ್ತಿರುವುದು ನಿಯಮ ಬಹಿರವಾಗಿದೆ ಎಂದು ಗುರು ವಾದ ಎಸ್ಎನ್ ನಾರಾಯಣಸ್ವಾಮಿ ಆರೋಪಿಸಿದರು. ತಾಲೂಕಿನ ದಾಸರ ಹೊಸಹಳ್ಳಿ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸದನದಲ್ಲಿ ಈಗಾಗಲೇ ರಾಜ್ಯದ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡರು ಸಹ ಅಲ್ಲಿ ಅಕ್ರಮ ಆಗಿದೆ ಎಂದು ತಿಳಿಸಿದ್ದಾರೆ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮಕ್ಕಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಿಸಲು ಆ ಜಾಗವನ್ನು ಮೀಸಲಿಡಲಾಗಿತ್ತು ಎಂದ್ರು