ಪೋಯಂ ಪಿಚ್ಚರ್ ಬ್ಯಾನರ್ ಅಡಿಯಲ್ಲಿ ರಘು ಹಾಸನ್ ನಿರ್ದೇಶಕ ನಿರ್ಮಿಸಿದ ಹುಡುಗ ಮತ್ತು ಶ್ವಾನದ ನಡುವಿನ ಬಾಂಧವ್ಯದ ಹೃದಯಸ್ಪರ್ಶಿ ಹಾಗೂ ಭಾವನಾತ್ಮಕ ಕಥೆ ಹೇಳುವ ನಾನು ಮತ್ತು ಗುಂಡ ಚಿತ್ರವು ಸೆಪ್ಟೆಂಬರ್.5ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟ ರಾಕೇಶ್ ಅಡಿಗ ತಿಳಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚಲನಚಿತ್ರವನ್ನು ಹಚ್ಚಹಸಿರಿನ ಸ್ಥಳಗಳಲ್ಲಿ ವ್ಯಾಪಕವಾಗಿ ಚಿತ್ರಿಕರಿಸಲಾಗಿದ್ದು, ತೀರ್ಥಹಳ್ಳಿ, ಕೊಪ್ಪ, ದೇವಂಗಿ ಹಾಗೂ ಆಗುಂಬೆಯ ಮಂಜಿನ ಸ್ಥಳಗಳಲ್ಲಿ ಚಿತ್ರಿಕರಿಸಲಾಗಿದೆ ಎಂದರು.