ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಇಂದು ಬೆಳ್ಳಂಬೆಳಗ್ಗೆ ರೋಲ್ ಕಾಲ್ ರಾಜ ಫೀಲ್ಡಿಗಿಳಿದು ವಾಹನ ಸವಾರರನ್ನು ಗಲಿಬಿಲಿ ಮಾಡಿರುವ ಘಟನೆ ನಡೆದಿದೆ. ಗೂಡ್ಸ್ ವಾಹನದ ಚಾಲಕರು ಹಫ್ತಾ ಕೊಡ್ದೆ ಇದ್ರೆ ಜಪ್ಪಯ್ಯ ಅಂದ್ರು ಈತ ಬಿಡೋದೆ ಇಲ್ಲ ಬಾಳೆ, ತರಕಾರಿ ವಾಹನಗಳೇ ಈತನ ಟಾರ್ಗೆಟ್ ಆಗಿದ್ದು ಪ್ರತಿಯೊಂದು ಗೂಡ್ಸ್ ವಾಹನವನ್ನ ಪಿಟ್ ಟು ಪಿನ್ ಚೆಕ್ ಮಾಡಷ್ಟೇ ಈ ಸಿಂಗಲ್ ಟಸ್ಕರ್ ಹೊರಡಲು ಬಿಡುತ್ತಿದ್ದಾನೆ. ಈ ಒಂಟಿ ಸಲಗನ ಹಾವಳಿಗೆ ನಡುಗಿ ಹೋಗಿರುವ ಗೂಡ್ಸ್ ವಾಹನ ಚಾಲಕರು ಲಾರಿಗೆ ಟಾರ್ಪಲ್ ಹಾಕಿದರೂ ಬಿಡದೇ ಟಾರ್ಪಾಲನ್ನೇ ತೆಗಯಲು ಪ್ರಯತ್ನಿಸುತ್ತಿದೆ. ಅದರಂತೆ , ಇಂದು ಕೂಡ ಬಂಡೀಪುರದಿಂದ ಊಟಿಗೆ ತೆರಳುವ ಮಾರ್ಗ ಮಧ್ಯೆ ಗಜರಾಜನ ಕಿರಿಕ್ ಮಾಡುವ ದೃಶ್ಯ ಸೆರೆಯಾಗಿದೆ.