ದೇವರೇ ಬಂದು ಹೇಳಿದರು ನಾನು ಮುಂದಿನ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಕೇಂದ್ರದ ಜಲ ಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಸ್ಪಷ್ಟ ಸಂದೇಶ ನೀಡಿದ್ದಾರೆ. ಅವರು ತುಮಕೂರು ನಗರದ ಪ್ರವಾಸಿ ಮಂದಿರದ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶನಿವಾರ ಮಧ್ಯಾಹ್ನ ಸುಮಾರು 2 ರ ಸಮಯದಲ್ಲಿ ಮಾತನಾಡಿದರು. ತುಮಕೂರು -ಬೆಂಗಳೂರಿಗೆ ನಾಲ್ಕು ಲೈನ್ ರೈಲ್ವೆ ಕಾಮಗಾರಿ ಸರ್ವೇ ಮುಗಿದೇ, ಡಿಪಿ ಆರ್ ಸಹ ಮಾಡಿಸಿದ್ದೇನೆ ಇದೆ ರೀತಿ ಹಲವು ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಮುಂದಿನ 50 ವರ್ಷಗಳವರೆಗೂ ಪ್ರಯಾಣಿಕರಿಗೆ ಉಪಯೋಗಕ್ಕೆ ಬರುವಂತಹ ದೂರ ದೃಷ್ಟಿಯ ಕೆಲಸ ಮಾಡುತ್ತಿದ್ದೇನೆ ಎಂದರು.