ಉಪ್ರೋತ ಜಲಾನಯನ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಳೆ ಮತ್ತು ಆಲಮಟ್ಟಿ ಅಣೆಕಟ್ಟಿನಿಂದ ಹೊರಹರಿವು ಹೆಚ್ಚಿಸಿದ್ದರಿಂದಾಗಿ ನಾರಾಯಣಪುರ ಆಣೆಕಟ್ಟಿನ ಒಳಹರಿವು ಹೆಚ್ಚಾಗುತ್ತಿದೆ. ಸದ್ಯ ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್ ನೀರಿ ಹರಿದು ಬರುತ್ತಿದೆ. ಹೊರಹರಿವು ಕ್ರಮೇಣ 51,240 ಕ್ಯೂಸೆಕ್‌ನಿಂದ ಆಗಸ್ಟ್ 10ರ ರವಿವಾರ ಸಂಜೆ 6 ಗಂಟೆಗೆ 60,000 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ ಹೀಗಾಗಿ ಕೃಷ್ಣಾನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆವಹಿಸಲು ಜಿಲ್ಲಾಧಿಕಾರಿ ಡಾ.ನಿತೀಶ್ ಮನವಿ ಮಾಡಿದ್ದಾರೆ.