ಹಳೆ ಬಾಗಲಕೋಟೆ ನಗರದಲ್ಲಿ ಹಮಾಸ ಉಗ್ರಹ ಭಾವಚಿತ್ರ ಹಾಕಿದ ಫ್ಲೆಕ್ಸ್ ವಿವಾದ. ಇಬ್ಬರ ಮೇಲೆ ಎಫ್.ಐ.ಆರ್ ದಾಖಲು.ಬಾಗಲಕೋಟೆ ಎಸ್ಪಿ ಸಿದ್ಧಾರ್ಥ ಗೋಯಲ್ ಹೇಳಿಕೆ. ಈದ ಮಿಲಾದ ಹಿನ್ನೆಲೆ ಆಕ್ಷೇಪಾರ್ಹ ಫ್ಲೆಕ್ಸ್ ಅಳವಡಿಸಿದ್ದ ಕೆಲವು ಕಿಡಿಗೇಡಿಗಳು.ಜಾಫರ ಹಮನಸಾಗರ ಹಾಗೂ ಇಸ್ಮಾಯಿಲ್ ಬಾಗೇವಾಡಿ ಎಂಬ ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲು.ಈ ಕುರಿತು ಹಿಂದೂ ಸಂಘಟನೆ ಮುಖಂಡ ನಾಗೇಶ ಅಂಬಿಗೇರ ಪ್ರಕರಣ ದಾಖಲಿಸಿದ್ದರು.ನಗರದ ಶಹರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ.ತನಿಖೆ ಮುಂದುವರೆಸಿದ್ದೇವೆ.ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದೇವೆ.ಮತ್ತೆ ಯಾರಾದ್ರು ಇದರಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.