ಗಾಂಜಾ ಮುತ್ತಲಿ ಆಟೋ ಚಾಲಕನೊಬ್ಬನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಟಿಪ್ಪು ನಗರದಲ್ಲಿ ನಡೆದಿದೆ. ಆಟೋ ಚಾಲಕರಿಬ್ಬರ ನಡುವೆ ಬಾಡಿಗೆ ವಿಚಾರವಾಗಿ ಆರಂಭವಾದ ಗಲಾಟೆ ಮಾರಣಾಂತಿಕವಾಗಿ ಹಲ್ಲೆ ನಡೆಸುವ ಮಟ್ಟಕ್ಕೆ ಹೋಗಿದೆ. ಆರೋಪಿ ಆಸಿಫ್ ಎಂಬಾತ ಆಟೋ ಚಾಲಕ ಶಫಿ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು ತೀವ್ರ ರಕ್ತಸ್ರಾವದಿಂದಾಗಿ ಶಫಿ ಸ್ಥಳದಲ್ಲಿ ಕೂಸಿತು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಚಿಕ್ಕಮಗಳೂರು ನಗರದ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಆಸಿಫ್ ತಪ್ಪಿಸಿಕೊಂಡಿದ್ದು ನಗರ ಠಾಣೆಯ ಪೊಲೀಸರು ಆರೋಪಿ ಆಸಿಫ್ ಗಾಗಿ ಬಲೆ ಬೀಸಿದ್ದಾರೆ.