ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಓಡಾಡುವುದಕ್ಕಿಂತ ಕಾಡಾನೆಗಳೆ ಹೆಚ್ಚಾಗಿ ಓಡಾಡತೊಡಗಿವೆ. ತೋಟ ಗದ್ದೆ ರಸ್ತೆ ಎಲ್ಲಂದರಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು ಕೆಲವೇ ಮನೆಯ ಬಳಿಗೆ ಬಂದು ಜನರನ್ನ ಆತಂಕಗೊಳಿಸುವ ಕೆಲಸವನ್ನ ಕಾಡಾನೆಗಳು ಮಾಡುತ್ತಿದ್ದು. ತುಪ್ಪೂರು ಗ್ರಾಮದ ನಾರಾಯಣ್ ಶೆಟ್ಟಿ ಎಂಬುವರ ಅಡಕೆ ಹಾಗೂ ಬಾಳೆ ತೋಟವನ್ನು ಸಂಪೂರ್ಣವಾಗಿ ನೆಲೆಸಮ ಮಾಡಿದ್ದು. ಕೂಡಲೇ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕೆಂದು ತಿಳಿಯರು ಒತ್ತಾಯಿಸಿದ್ದಾರೆ