ಮೈಸೂರು ದಸರಾ ಉದ್ಘಾಟಿಸಲು ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿರುವುದು ಖಂಡನೀಯ ಎಂದು ಎಂ.ಎಲ್.ಸಿ ಪಿ.ಹೆಚ್.ಪೂಜಾರ್ ಅವರು ಹೇಳಿದ್ದಾರೆ.ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು,ಬಾನು ಮುಷ್ತಾಕ್ ಅವರನ್ನ ಸಾಹಿತಿಯಾಗಿ, ಕನ್ನಡತಿಯಾಗಿ ಗೌರವಿಸುವೆ ,ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ.ಅವರೊಬ್ಬ ಎಡಪಂಥೀಯ ಧೋರಣೆಯವರಾಗಿದ್ದು ಅವರ ಮನೋಭಾವ ಮೈಸೂರು ದಸರಾ ಹಬ್ಬದ ವಿಧಿ ವಿಧಾನಗಳಿಗೆ ಹೊಂದಿಕೆಯಾಗದು.ಸರ್ಕಾರ ಅವರನ್ನ ಆಹ್ವಾನಿಸಿದ್ದು ತಪ್ಪು ಎಂದರು.ಇನ್ನು ಧರ್ಮಸ್ಥಳ ಪ್ರಕರಣ,ಧರ್ಮಸ್ಥಳಕ್ಕೆ ಬಿಜೆಪಿ ಯಾತ್ರೆ,ಯುಕೆಪಿ ವಿಷಯ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದರು.