ಮಂಡ್ಯ : ಏನು ವಿಚಾರ ಇಲ್ಲದಿದ್ರೂ ತಿಟೇ ಮಾಡೋದು ವಿರೋಧ ಪಕ್ಷದ ಕೆಲಸ ಎಂದಿರುವ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ದಸರಾ ಉದ್ಘಾಟಕರ ಆಯ್ಕೆಗೆ ಬಿಜೆಪಿ ವಿರೋಧ ವ್ಯಕ್ತ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ ಮಂಡ್ಯದಲ್ಲಿ ಗುರುವಾರ ಸಾಯಂಕಾಲ 5.30 ರ ಸಮಯದಲ್ಲಿ ಸುದ್ದಿಗಾರರ ಪ್ರಶ್ನೆ ಗಳಿಗೆ ಉತ್ತರಿಸಿದ ಅವರು ಏನು ಇಲ್ಲದಿದ್ದರೆ ಈ ರೀತಿ ಕ್ಯಾತೆ ತೆಗೆಯುತ್ತಾರೆ. ಈ ಹಿಂದೆ ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದ್ದಾರೆ. ಇದು ಐತಿಹಾಸಿಕ ದಸರಾ ಯಾವುದೇ ಸಮಾಜ ಧರ್ಮ ಅಂತ ಏನೂ ಇಲ್ಲ ಸಾಹಿತಿಗಳು ಸೇರಿ ಅನೇಕರು ಉದ್ಘಾಟನೆ ಮಾಡಿದ್ದಾರೆ ಎಂದರು.