ಚಾಮರಾಜನಗರ ಜಿಲ್ಲೆಯಲ್ಲಿ ಇರುವ ಸರ್ಕಾರಿ ಭ್ರಷ್ಟ ಅಧಿಕಾರಿಗಳನ್ನು ಜಿಲ್ಲೆಯಿಂದ ತೊಲಗಿಸಿ ಎಂದು ಕನ್ನಡ ಪರ ಸಂಘಟನೆಗಳು ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಕನ್ನಡ ಹೋರಾಟಗಾರ ನಮ್ಮನೇ ಪ್ರಶಾತ್ ಮಾತನಾಡಿ ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳು ಇದ್ದು ಯಾವುದೇ ಅಭಿವೃದ್ಧಿಗಳು ನಡೆಯುತ್ತಿಲ್ಲ ಇಂತಹ ಅಧಿಕಾರಿಗಳನ್ನು ಸರ್ಕಾರದ ಸೇವೆಗಳಿಂದ ವಜಾಗೊಳಿಸಬೇಕು. ಹಾಗೂ ಅವರ ಸೇವಾ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ಸಮಗ್ರ ತನಿಕೆ ನಡೆಸಬೇಕೆಂದು ಎಂದು ಒತ್ತಾಯಿಸಿದರು.