ಸಕಲೇಶಪುರ :ಪಟ್ಟಣದಿಂದ ಹಾಸನಕ್ಕೆ ಬರುತ್ತಿದ್ದ ಥಾರ್ ವಾಹನ ಸಕಲೇಶಪುರ ಮಾರ್ಗ ಮಧ್ಯೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಮರದ ದಿಮ್ಮಿಯೊಂದಕ್ಕೆ ಬಲವಾಗಿ ಗುದ್ದಿದ ರಭಸಕ್ಕೆ ಜೀಪ್ ನುಜ್ಜುಗುಜ್ಜಾಗಿದ್ದು , ಅಪಘಾತದಿಂದಾಗಿ ವಾಹನ ಚಾಲಕ ಅನಿಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದ್ದು ಗಾಯಾಳವನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹೆಚ್ಚಿನ ಚಿಕಿತ್ಸೆಗೆ ಅವರನ್ನು ಹಾಸನ ನಗರದ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರುಳಿದಿದ್ದಾರೆ. ಮೃತ ಅನಿಲ್(27) ಹಾಸನದ ಸುರಕ್ಷ ಮೆಡಿಕಲ್ ನ ಮಾಲೀಕರಾಗಿದ್ದರು.