ಮುಂಡರಗಿ ಪಟ್ಟಣದ ಕೆ ಇ ಬಿ ಹತ್ತಿರ ಗಣೇಶ ಗುಡಿಯಿಂದ ತಹಶೀಲ್ದಾರ ಕಚೇರಿಯ ವರೆಗೆ ಧರ್ಮದ ಉಳಿವಿಗಾಗಿ ಧರ್ಮಯುದ್ದ ಘೋಷವಾಕ್ಯದೊಂದಿಗೆ ಬಿಜೆಪಿಯಿಂದ ಪ್ರತಿಭಟನೆ ಹಮ್ಮಿಕೋಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಶಾಸಕ ಚಂದ್ರು ಲಮಾಣಿ, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಷಡ್ಯಂತ್ರ ನಡೆಸುವ ಮೂಲಕ ಧಾರ್ಮಿಕ ಕೇಂದ್ರಕ್ಕೆ ಕಪ್ಪು ಮಸಿ ಬಳಿಯುವ ಯತ್ನ ಮಾಡುತ್ತಿರುವ ಎಲ್ಲಾ ಕುತಂತ್ರಿಗಳನ್ನು ಕೂಡಲೇ ಬಂಧಿಸಬೇಕು ಅಂತ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳು, ಎಲ್ಲಾ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.