ಅರಸೀಕೆರೆ: ಸ್ಥಳೀಯ ಕೆ.ಎಂ. ಶಿವಲಿಂಗೇಗೌಡ ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದನ್ನು ನಾನು ಸ್ವಾಗತ ಮಾಡುವೆ ಎಂದು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಹೇಳಿದರು. ಶಾಸಕ ಶಿವಲಿಂಗೇಗೌಡರಿಗೆ ಸಂತೋಷ್ ಸವಾಲು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ನೀವು ಮೊಕದ್ದಮೆ ಹೂಡಿ, ನಾನೂ ಸಹ ಕಾನೂನಾತ್ಮಕವಾಗಿ ಎದುರಿಸುವೆ ಎಂದು ಸವಾಲು ಹಾಕಿದರು. ನೀವು ಏನೆ ಬೆದರಿಕೆ ಹಾಕಿದರೂ ನಾನು ಭ್ರಷ್ಟಾಚಾರದ ವಿರುದ್ದ ಹೋರಾಟ ನಿಲ್ಲಿಸುವುದಿಲ್ಲ. ಹೋರಾಟದಿಂದ ಹಿಂದೆ ಸರಿಯುವುದೂ ಇಲ್ಲ. ನೀವು, ನಿಮ್ಮ ಆಣತಿಯಂತೆ ಅಧಿಕಾರಿಗಳು ನಡೆಸಿರುವ ಭ್ರಷ್ಟಾ