ಅನುದಾನ ರಹಿತ ಖಾಸಗಿ ಶಾಲೆ ಆಡಳಿತ ಮಂಡಳಿಗಳ ಬೇಡಿಕೆಗಳ ಇಡಿರಿಗೆ ವಿಷಯದಲ್ಲಿ ಎಂಎಲ್ಎ ಎಂಎಲ್‌ಸಿಗಳ ಅರ್ಥಪೂರ್ಣ ಸಂವಾದವಾದ ಪ್ರಸಂಗ ಶನಿವಾರ ಸಂಜೆ 4ಕ್ಕೆ ನಡೆಯಿತು. ಶಿಕ್ಷಕರ ದಿನೋತ್ಸವ ವೇದಿಕೆಯಲ್ಲಿ ಶಾಸಕ ಡಾಕ್ಟರ್ ಸಿದ್ದು ಪಾಟೀಲ್ ಮಾತನಾಡುವಾಗ ನಾನು ನಿಮ್ಮ ಜೊತೆಗಿದ್ದೇನೆ ಆದರೆ ಎಂ ಎಲ್ ಸಿ,ಕೆಕೆಆರ್‌ಡಿಬಿ ಸದಸ್ಯ ಭೀಮರಾವ್ ಪಾಟೀಲ ಬೆಂಬಲಿಸುತ್ತಾರ ಕೇಳಿ ಎಂದಾಗ ಎಂಎಲ್ಸಿ ಅವರು ನೀಡಿದ ಪ್ರತಿಕ್ರಿಯೆ ಶಿಕ್ಷಕರ ಸಂತಸಕ್ಕೆ ಕಾರಣವಾಯಿತು.