ಗಣೇಶ ವಿಸರ್ಜನೆಯಂದು ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಹೇಳಿದರು. ಗಣೇಶ ಮಂಡಳಗಳು ಸ್ವಯಂ ಪ್ರೇರಿತವಾಗಿ ವಿಸರ್ಜನೆ ನಡೆಸಿದ್ದು, ಕಪಿಲೇಶ್ವರ ಹೊಂಡದಲ್ಲಿ ಮಹಾನಗರ ಪಾಲಿಕೆಯ ಗಣೇಶ ವಿಜರ್ಜನೆಯು ಇಂದು ಬೆಳಗ್ಗೆ 5.30ಕ್ಕೆ ಅಂತಿಮವಾಗಿ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಿದರು ಎಂದು ಹೇಳಿದರು ಸೋಮವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಬೆಳಗಾವಿ ನಗರದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆಯು ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಿಯುತವಾಗಿ ಸಂಪನ್ನಗೊಂಡಿದೆ ಎಂದರು