Download Now Banner

This browser does not support the video element.

ಕೊಳ್ಳೇಗಾಲ: ಉತ್ತಂಬಳ್ಳಿ ಮೇಲ್ಸೇತುವೆ ತಡೆಗೋಡೆ ಕುಸಿತ, ಸ್ಥಳಕ್ಕೆ ಮಾಜಿ ಸಚಿವ ಎನ್. ಮಹೇಶ್ ಭೇಟಿ, ಪರಿಶೀಲನೆ

Kollegal, Chamarajnagar | Aug 25, 2025
ಕೊಳ್ಳೇಗಾಲ: ತಾಲೂಕಿನ‌ ಉತ್ತಂಬಳ್ಳಿ ಬಳಿಯ ಮೇಲ್ಸೇತುವೆ ಕುಸಿತಗೊಂಡಿರುವ ಹಿನ್ನಲೆಯಲ್ಲಿ ಮಾಜಿ ಸಚಿವ ಎನ್ ಮಹೇಶ್ ಪರಿಶೀಲನೆ ನೆಡೆಸಿದರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿ ಬಳಿ ನಿರ್ಮಿತವಾಗಿರುವ ಮೇಲ್ಸೇತುವೆಯ ತಡೆಗೋಡೆ ಕುಸಿತಗೊಂಡಿದ್ದು, ಪ್ರಯಾಣಿಕರಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಈ ಮೇಲ್ಸೇತುವೆ ರಸ್ತೆ ಚಾಮರಾಜನಗರ – ಕೊಳ್ಳೇಗಾಲ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಆಗಿದ್ದು, ವಾಹನ ಸಂಚಾರಕ್ಕೆ ಬಹಳ ಮಹತ್ವವಿದೆ. ಈ ತಡೆಗೋಡೆ ಕುಸಿತದಿಂದಾಗಿ ವಾಹನಗಳ ಓಡಾಟಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Read More News
T & CPrivacy PolicyContact Us