ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿ ಸಮೀಪದ ಕಣ್ಣೆಗಾಲ ಗ್ರಾಮದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶ್ರೀ ದುರ್ಗಾ ವರಮಹಾಲಕ್ಷ್ಮೀ ಅಮ್ಮನವರ ದೇವಾಲಯದಲ್ಲಿ ಭಕ್ತಿಭರಿತವಾಗಿ ಹಾಗೂ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನೆರವೇರಿತು.ಶ್ರಾವಣ ಮಾಸದ ಮೂರನೇ ಶುಕ್ರವಾರದಂದು ವಿಶೇಷವಾದ ಈ ಹಬ್ಬದಲ್ಲಿ ದೇವಿಗೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ ಅರ್ಚನೆಗಳು ಸೇರಿದಂತೆ ನಾನಾ ಧಾರ್ಮಿಕ ಆಚರಣೆಗಳು ನೆರವೇರಿಸಲ್ಪಟ್ಟವು.ಈ ದೇವಾಲಯವು ವಿಶಿಷ್ಟವಾದ ಆದ್ಯಾತ್ಮಿಕ ಮಹತ್ವವನ್ನು ಹೊಂದಿರುವುದರಿಂದ ಸಮೀಪದ ಕೆಂಪನಪುರ ಮಂಗಲದ ಹೊಸೂರು, ಹುಲ್ಲೆಪುರ ಸೇರಿದಂತೆ ಹಪವು ಕಡೆಯಿಂದ ಭಕ್ತರು ಆಗಮಿಸಿದ್ದರು