ಸಾಲ ಕಟ್ಟುವಂತೆ ಮನೆ ಬಳಿ ಮೈಕ್ರೋ ಫೈನಾನ್ಸ್ ಸಿಬ್ಬಂಧಿ ಗಲಾಟೆ ಮಾಡಿದ ಹಿನ್ನಲೆ ಶನಿವಾರ ಬೆಳಿಗ್ಗೆ 8 ಗಂಟೆ ವೇಳೆ ಗಲಾಟೆಯ ಅವಮಾನದಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯ ನೇತ್ರಾವತಿ (35) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆ. ಚಿತ್ರದುರ್ಗ ನಗರದ ಹೊರ ವಲಯದ ಕವಾಡಿಗರಹಟ್ಟಿಯಲ್ಲಿ 50 ಸಾವಿರ ಸಾಲ ಕಟ್ಟಲು ಎಕ್ವಿಟ್ ಹೌಸ್ ಮೈಕ್ರೋ ಪೈನಾನ್ಸ್ ಸಿಬ್ಬಂದಿ ಗಲಾಟೆ ಮಾಡಿದ್ದರು. ಇಂದು ಸಂಜೆ ವೇಳೆಗೆ ಸಾಲ ಕಟ್ಟದಿದ್ರೆ ಮತ್ತೆ ಬರ್ತೆವೆ ಅಂತ ಧಮ್ಕಿ ಹಾಕಿದ್ದ ಎಂದು ಆರೋಪಿಸಲಾಗಿದೆ.