ಹಾವು ಕಡಿದು ಯುವಕನ್ನೊಬ್ಬ ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಶೇಕು ತಂಡದಲ್ಲಿ ಸಂಭವಿಸಿರುವ ಘಟನೆ ಗುರುವಾರ ಸಂಜೆ 7ಕ್ಕೆ ಪತ್ತೆಯಾಗಿದೆ. ಹಾವಿನ ಕಡಿತದಿಂದ ಅಸ್ವಸ್ಥಗೊಂಡ ಯುವಕನನ್ನು ಶೇಕು ನಾಯಕ್ ತಂಡದ ಪ್ರೀತಮ್ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ನೀಡಿದ ಪ್ರಥಮ ಚಿಕಿತ್ಸೆ ಹಿನ್ನೆಲೆಯಲ್ಲಿ ಯುವಕ ಅಪಾಯದಿಂದ ಪಾರಾಗಿದ್ದಾನೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.