80 ವರ್ಷಗಳಿಂದ ಖರಾಬು ಜಮೀನಿನಲ್ಲಿ ವಾಸವಿದ್ದ ಕುಟುಂಬಗಳನ್ನ 5 ತಿಂಗಳ ಹಿಂದೆ ಬೀದಿಪಾಲು ಮಾಡಿದ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಂಡು ಸಂತ್ರಸ್ಥ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರದ ವಿವಿದ ಇಲಾಖೆಗಳಿಂದ ಸೂಚನೆ ಬಂದರೂ ಮೈಸೂರು ಜಿಲ್ಲಾಡಳಿತ ಹಾಗೂ ನಂಜನಗೂಡು ತಾಲೂಕು ಆಡಳಿತ ಕ್ಯಾರೆ ಎನ್ನದೆ ಜಾಣ ಕುರುಡರಂತೆ ವರ್ತಿಸಿರುವ ಅಚ್ಚರಿ ಅಂಶ ಬೆಳಕಿಗೆ ಬಂದಿದೆ.ಬೀದಿಪಾಲಾದ ಕುಟುಂಬಗಳಿಗೆ ನ್ಯಾಯ ಒದಗಿಸದ ಜಿಲ್ಲಾಡಳಿತದ ಬಗ್ಗೆ ಸಂತ್ರಸ್ಥ ಕುಟುಂಬಗಳು ಹಿಡಿಶಾಪ ಹಾಕುತ್ತಿವೆ.ತೋರಿಕೆಗಾಗಿ ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು ಕೇವಲ ಸಾಂತ್ವನ ಹೇಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ನಂಜನಗೂಡು ತಾಲೂಕು ಹೊರಳವಾಡಿ ಹೊಸೂರು ಗ್ರಾಮದ ಖರಾಬು ಜಾಗದಲ್ಲಿ 85 ವರ್ಷಗಳಿಂದ ವಾಸವಿದ್ದ ಹಂದಿಜೋಗಿ ಸಮುದಾಯ