ಗೌರಿ ಗಣೇಶ ಹಬ್ಬದ ನಿಮಿತ್ಯವಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಡಿವಾ.ಎಸ್.ಪಿ ಸಯ್ಯದ ರೋಷನ್ ಜಮೀರ ಅವರ ನೇತೃತ್ವದಲ್ಲಿ ಪೋಲಿಸ ಪಥ ಸಂಚಲನ ಜರುಗಿತು. ಜಮಖಂಡಿ ನಗರದ ದೇಸಾಯಿ ವೃತ್ತದಿಂದ ಪೋಲಿಸ ಪತ ಸಂಚಲನ ಪ್ರಾರಂಭವಾಗಿ ಅಶೋಕ ವೃತ್ತ,ಅರ್ಬನ್ ಬ್ಯಾಂಕ ಚೌಕ ,ಗವಳಿಗಲ್ಲಿ, ರಾಮದೇವ ಗಲ್ಲಿ ಸೇರಿದಂತೆ ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ದೇಸಾಯಿ ವೃತ್ತದಲ್ಲಿ ಸಮಾರೋಪ ಗೊಂಡಿತು.ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದು,ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡ ಬಗ್ಗೆ ಪೊಲೀಸರು ಪಥಸಂಚಲನದ ಮೂಲಕ ಸಂದೇಶ ಸಾರಿದರು.