ಸುಮಾರು ಒಂದು ತಿಂಗಳುಗಳಿಂದ ಧರ್ಮಸ್ಥಳದ ವಿಚಾರ ಜನರ ಭಾವನೆ ಬೇರೆಡೆ ಸೆಳೆಯುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ, ಧರ್ಮಸ್ಥಳದ ಬಗ್ಗೆ ರಾಜ್ಯದ ಜನರಿಗೆ ಭಯ ಭಕ್ತಿ ಇದೆ. ಆದರೆ ಇಂದು ಕಾಂಗ್ರೆಸ್ ಸರ್ಕಾರ ಆ ಕ್ಷೇತ್ರಕ್ಕೆ ಅವಮಾನ ಮಾಡಿದ್ದಾರೆ. ಧರ್ಮಸ್ಥಳ ಹಾಗೂ ಹೆಗಡೆ ಅವರ ವಿಚಾರವಾಗಿ ಸುಳ್ಳು ಮಾಹಿತಿ ಹರಿಬಿಡಲಾಗುತ್ತಿದೆ. ಒಂದು ಧರ್ಮದ ಓಲೈಕೆಗಾಗಿ ಕಾಂಗ್ರೆಸ್ ಸರ್ಕಾರ ಬಲ ಪ್ರಯೋಗ ಮಾಡುತ್ತಿದೆ ಎಂದು ಮಾಡಗಿ ಹೇಳಿದರು