ಚಿತ್ರದುರ್ಗ ಕೈ ಶಾಸಕ ಕೆಸಿ ವೀರೇಂದ್ರ ಪಪ್ಪಿ ಮೇಲೆ ಇಡಿ ದಾಳಿ ಸತತ 22 ಗಂಟೆಗಳ ಕಾಲ ನಡೆಸಿದ್ದು, ಈ ಕುರಿತು ಶುಕ್ರವಾರ ಬೆಳಗಿನ ಜಾವ 2 ಗಂಟೆಗೆ ಶಾಸಕರ ಸಹೋದರನ ಕೆ.ಸಿ.ನಾಗರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತ್ನಾಡಿದ ಅವರು ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿದ್ದೇವೆ, ನಮ್ಮಎಲ್ಲಾ ಪ್ರಾಪರ್ಟಿ ದಾಖಲೆಗಳನ್ನು ಪರಿಶೀಲನೆ ನಡೆಸಿ ತೆಗೆದುಕೊಂಡು ಹೋಗಿದ್ದಾರೆ. ಎಲ್ಲಾ ದಾಖಲೆಗಳು ಕೂಡ ಲೀಗಲ್ ಆಗಿ ಇವೆ. ಇಡಿ ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳನ್ನು ನಾವು ನೀಡಲು ಸಿದ್ದರಿದ್ದೇವೆ ಎಂದರು. ಅಲ್ಲದೆ ನಮಗೆ ಯಾವುದೇ ನೋಟೀಸ್ ನೀಡಿಲ್ಲ. ನಮ್ಮ ನಹೋದರನನ್ನು ಕೂಡ ಈಗಾಗಲೇ ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.