4.5 ಲಕ್ಷ ರೂಪಾಯಿಗೆ ಹೆಣ್ಣುಮಗುವನ್ನು ಮಾರಾಟದ ಮಾಡಿರುವ ಪ್ರಕರಣವೊಂದು ಕಾಪು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಡಾ. ಸೋಮೇಶ್ ಸೊಲೊಮನ್, ವಿಜಯಲಕ್ಷ್ಮೀ/ ವಿಜಯ, ನವನೀತ್ ನಾರಾಯಣ ಮಗು ಮಾರಾಟ ಪ್ರಕರಣದಲ್ಲಿ ಬಂದಿಸಲಾಗಿದೆ ಎಂದು ಎಸ್ ಪಿ ಯವರು ತಿಳಿಸಿದ್ದಾರೆ ಹಾಗೆ ಕುಂದಾಪುರದ ಕೋಟೇಶ್ವರದಲ್ಲಿ ಲೈಂಗಿಕ ಸಂಪರ್ಕದ ಆಸೆ ಹುಟ್ಟಿಸಿ ಹನಿ ಟ್ರ್ಯಾಪ್ ಮಾಡಿ ಮನೆಯಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿ ವ್ಯಕ್ತಿಯೋರ್ವರನ್ನು ಕೂಡಿ ಹಾಕಿ ಬಲವಂತವಾಗಿ ೮೦ ಸಾವಿರಕ್ಕೂ ಅಧಿಕ ಹಣ ಲೂಟಿ ಮಾಡಿದ ಘಟನೆ ಕುಂದಾಪುರದಲ್ಲಿ ನಡೆದಿದೆ ಹಾಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನ ಬಂದಿಸಲಾಗಿದೆ ಎಂದು ಎಸ್ ಪಿ ಅವರು ತಿಳಿಸಿದ್ದಾರೆ.