ಜಾನುವಾರು ಅಕ್ರಮ ಸಾಗಾಟ ಮಾಡುತ್ತಿದ್ದ ವಾಹನವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಆನಂದಪುರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಗರ ತಾಲೂಕಿನ ತ್ಯಾಗರ್ತಿ ಮಾರಿಕಾಂಬಾ ವೃತ್ತದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಪರವಾನಿಗೆ ಇಲ್ಲದೆ ಎರಡು ಎಮ್ಮೆ, ಒಂದು ಕೋಣ,ಎರಡು ಹೋರಿಗಳನ್ನ ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ ತುಂಬಿ ಸಾಗಿಸಲಾಗುತ್ತಿತ್ತು. ಇವಳೆ ಪೊಲೀಸರು ಗ್ರಾಮಸ್ಥರ ಸಹಕಾರದೊಂದಿಗೆ ವಾಹನವನ್ನು ತಡೆದಿದ್ದು ಶಿಕಾರಿಪುರ ತಾಲೂಕಿನ ಬಿಳಕಿ ಗ್ರಾಮದ ಮೆಹಬೂಬ್ ಬಾಷಾ ಹಾಗೂ ಮಕ್ಬೂಲ್ ಸಾಬ್ ಎಂಬುವರನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಈ ಕುರಿತಾದ ಮಾಹಿತಿ ಶನಿವಾರ ಲಭ್ಯವಾಗಿದೆ.