ರಾಯಚೂರದಲ್ಲಿ ಏಮ್ಸ್ ಮಂಜೂರು ಮಾಡುವಂತೆ ಆಗ್ರಹಿಸಿ ಶನಿವಾರ ಸಂಜೆವರೆಗೆ ರಾಯಚೂರ ನಗರದ ಮೈದಾನದಲ್ಲಿ ಧರಣಿಗೆ ನಡೆಸಲಾಯಿತು. ಧರಣಿಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ರಾಯಚೂರ ಜಿಲ್ಲೆಗೆ ಏಮ್ಸ್ ಮಂಜೂರು ನೀಡುವವರೆಗೂ ಧರಣಿ ನಿರಂತರವಾಗಿ ನಡೆಯಲಿದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಡಾ. ಬಸವರಾಜ್ ಕಳಸ, ಅಶೋಕ್ ಕುಮಾರ್ ಜೈನ್, ಎಂ ಆರ್ ಬೇರಿ, ಮಾರಪ್ಪ ವಕೀಲ, ನರಸಪ್ಪ ಬಾಡಿಯಾಳ, ಹೇಮರಾಜ ತಿಮ್ಮಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.