ಹನೂರು: ಮಹದೇಶ್ವರ ಬೆಟ್ಟದ ಪಾದಯಾತ್ರಿಗಳಿಗಾಗಿ ನಿರ್ಮಿಸಲ್ಪಟ್ಟ ಮೆಟ್ಟಿಲುಗಳ ಮೇಲೆ 2ರಿಂದ3 ಕಡೆಗಳಲ್ಲಿ ಬಿದಿರು ಮರಗಳು ಅಡ್ಡಲಾಗಿ ಬಿದ್ದು, ಭಕ್ತಾಧಿಗಳ ಸಂಚಾರದಲ್ಲಿ ತೀವ್ರ ಅಡಚಣೆಯಾಗುತ್ತಿದೆ. ಮಹದೇಶ್ವರಬೆಟ್ಟ ತಾಳುಬೆಟ್ಟ ಮಾರ್ಗದ ಕಾಲ್ನಡಿಗೆಯ ಮಾರ್ಗದಲ್ಲಿ ರಾಮವ್ವಕೊಳ ಬಳಿ ಬಿದಿರು ಮರಗಳು ಯಥೇಚ್ಛವಾಗಿ ರಸ್ತೆಯ ಉದ್ದಕ್ಕೂ ಯಥೆಚ್ಚವಾಗಿ ರಸ್ತೆಗೆ ಮುರಿದು ಬಿದ್ದಿವೆ ಇದ್ದರಿಂದ ಪಾದಯಾತ್ರೆ ಮಾಡುತ್ತಿರುವ ಭಕ್ತರಿಗೆ ಅಪಾಯದ ಸ್ಥಿತಿ ನಿರ್ಮಾಣವಾಗಿದೆ.ಅಲ್ಲದೆ ಶನಿವಾರದ ಅಮಾವಾಸ್ಯೆ ಸಂದರ್ಭದಲ್ಲಿ ಹೆಚ್ಚಿನ ಭಕ್ತರು ಪಾದಯಾತ್ರೆಗೆ ಇಳಿಯುವ ಸಂದರ್ಭದಲ್ಲಿ ಈ ತೊಂದರೆ ಮತ್ತಷ್ಟು ಹೆಚ್ಚಾಗುತ್ತಿದೆ ಆದ್ದರಿಂದ ಶೀಘ್ರ ತೆರವುಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ