ಚಿತ್ರದುರ್ಗ ತಾಲೂಕಿನ ಓಬವ್ವನಾಗತ್ತಿಹಳ್ಳಿ ಗ್ರಾಮದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಚಿರತೆ ಗ್ರಾಮಸ್ಥರಿಗೆ ಕಾಣಿಸಿಕೊಂಡು ಭಯದ ವಾತಾವರಣ ಸೃಷ್ಟಿಯಾಗಿತ್ತು. ಇದರ ಜೊತೆ ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಕಾಟದಿಂದಾಗಿ ಗ್ರಾಮಸ್ತರು ಹೈರಾಣಾಗಿದ್ದು ಓಡಾಡಲು ಸಹ ಬಯ ಪಡುವ ಪರಿಸ್ಥಿತಿ ಬಂದಿದ್ದು ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಚಿರತೆ ಸೆರೆಗಾಗಿ ಬೋನನ್ನ ಇಟ್ಟಿದ್ದರು. ತಡರಾತ್ರಿ ಚಿರತೆ ಬೋನಿಗೆ ಬಿದ್ದಿದ್ದು ಚಿರತೆ ನೋಡಲು ಗ್ರಾಮಸ್ಥರು ಆಗಮಿಸಿ ಚಿಂತೆಯನ್ನು ನೋಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿನ ರವಾನಿಸಿದ್ದಾರೆ