ಕೊಳ್ಳೇಗಾಲ: ತಾಲೂಕಿನ ಟಗರಪುರ ಬಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ, ಕಾರು ಜಮೀನಿಗೆ ಇಳಿದ ಘಟನೆ ಬುಧವಾರ ನಡೆದಿದೆ. ಸಹಜವಾಗಿಯೇ ಸಂಭವಿಸಬಹುದಾದ ಭಾರಿ ಅಪಾಯ ತಪ್ಪಿದ ಪರಿಣಾಮ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೊಳ್ಳೇಗಾಲ–ಮೈಸೂರು ಮಾರ್ಗದಲ್ಲಿ ಎಕೆ 10 ಎಫ್ 0230 ನಂಬರ್‌ನ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕೆಎಲ್ 65 ಎಂ 2154 ನಂಬರ್‌ನ ಕಾರು ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಕಾರು ಚಾಲಕರಾದ ಆರ್ಯ ಎಂಬ ಮಹಿಳೆಯ ನಿಯಂತ್ರಣ ತಪ್ಪಿ ಕಾರು ಸಮೀಪದ ಜಮೀನಿಗೆ ಇಳಿದಿದೆ. ಅದೃಷ್ಟವಶಾತ್ ಯಾವುದೇ ಗಾಯ ಅಥವಾ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದ ಮಾಹಿತಿ ತಿಳಿದ ತಕ್ಷಣ ಮಾಂಬಳ್ಳಿ ಠಾಣೆಯ ಎಎಸ್ಸೈ ಮಲ್ಲಿಕಾರ್ಜುನ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ