ಕೋಲಾರ ಜಯನಗರದ ಡಾಕ್ಟರ್ ಬಿಆರ್ ಅಂಬೇಡ್ಕರ್ ಮಕ್ಕಳ ಉದ್ಯಾನವನದಲ್ಲಿ ಯೋಧರ ಸ್ಮಾರಕದ ಬಳಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದ ಮಿಲನ್ ಸಿಂಗ್, ಗೋವಿಂದ,ರಾಜೀಬ್ ಹಾಗೂ ಜಿಮ್ಮಿ,ರಾಮ್ ಸಿಂಗ್, ಇಕ್ಬಲ್ ಖಾನ್, ಸಂದೀಪ್, ಮಂದೀಪ್ ರವರ ಭಾವಚಿತಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಮೌನ ಆಚರಿಸಿ ಶ್ರದ್ಧಾಂಜಲಿ ಸೋಮವಾರ ಅರ್ಪಿಸಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯರಾದ ಮುರಳಿ ಗೌಡರವರು ಮತನಾಡಿ ಯೋಧರೆಂದರೆ ದೇಶದ ನಿಜವಾದ ನಾಯಕರು ಯೋಧರು ಗಡಿ ಕಾಯುವ ಕೆಲಮಾಡದಿದ್ದರೆ ನಾವು ನಮ್ಮವರೊಂದಿಗೆ ಸಂತೋಷದಿಂದಿರಲು ಸಾದ್ಯವೇ ಇಲ್ಲ.ತಮ್ಮ ಸುಖ ,ಶಾಂತಿ,ನೆಮ್ಮದಿ ಯನ್ನು ಬದಿಗಿಟ್ಟು ದೇಶವನ್ನು ಕಾಯಲು ಹಗಲಿರುಳು ,ನಿದ್ದೆ ಬಿಟ್ಟು ನಿಲ್ಲುವವರು ಎಂದ್ರು