ಬಳ್ಳಾರಿ ಜಿಲ್ಲೆಯ ದೇವಿ ನಗರ 5ನೇ ಕ್ರಾಸ್ ಪ್ರದೇಶದಲ್ಲಿ ಮಟ್ಕಾ ಬರೆಯುತ್ತಿದ್ದ ತಿಪ್ಪೇಸ್ವಾಮಿ ಎಂಬ ವ್ಯಕ್ತಿಯನ್ನು ಬ್ರೂಸ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತನಿಂದ ಪೊಲೀಸರು ₹2400 ನಗದು, ಎರಡು ಮಟ್ಕಾ ಪಟ್ಟಿ ಹಾಗೂ ಒಂದು ಬಾಲ್ ಪೆನ್ ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಸೆಪ್ಟಂಬರ್ 9,ಮಂಗಳವಾರ ಸಂಜೆ 6 ಗಂಟೆಗೆ ತಿಳಿದಿದೆ.ಈ ಸಂಬಂಧವಾಗಿ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ