ಯಾವುದೇ ಮುನ್ಸೂಚನೆ ಕೊಡದೇ ಒಣ ಮರಗಳ ನೆಪವೊಡ್ಡಿ 10 ಮರಗಳನ್ನು ಕತ್ತರಿಸಲಾಗಿದ್ದು ಪರಿಸರ ವಿರೋಧಿ ನಡೆ ಅನುಸರಿಸುತ್ತಿದ್ದಾರೆಂದು ಕರ್ನಾಟಕ ಕಾವಲು ಪಡೆ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲೀಕ್ ಕಿಡಿಕಾರಿದರು. ಗುಂಡ್ಲುಪೇಟೆ ಪಟ್ಟಣದ ಬಿಇಒ ಕಚೇರಿ ಹಿಂಭಾಗ ಇದ್ದ 10 ಮರಗಳನ್ನು ಯಾವುದೇ ಸಾರ್ವಜನಿಕ ಪ್ರಕಟನೆ ಕೊಡದೇ ಮರಗಳನ್ನು ಕತ್ತರಿಸಿದ್ದಾರೆ. ಈ ಹಿಂದೆ 3 ಮರಗಳನ್ನು ಕತ್ತರಿಸಿದ್ದರು- ಈಗ ಮತ್ತೇ 10 ಮರಗಳನ್ನು ಕತ್ತರಿಸಿದ್ದಾರೆ ಎಂದು ಬುಧವಾರ ಆಕ್ರೋಶ ಹೊರಹಾಕಿದರು.